ಗೌರವಾಧ್ಯಕ್ಷರು

ಗೌರವಾಧ್ಯಕ್ಷರು

ಡಾ . ಪಿ . ವಿ ನಾರಾಯಣ

ಅಧ್ಯಕ್ಷರು

ಅಧ್ಯಕ್ಷರು

ಡಾ. ಬೈರಮಂಗಲ ರಾಮೇಗೌಡ

ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನಕ್ಕೆ ನಿಮಗೆ ಸುಸ್ವಾಗತ ...

"ದೇಶದಲ್ಲಿ ಹುಳು ತಿಂದುಹೋಗದೆ ಇರುವ ಗ್ರಂಥಗಳನ್ನೆಲ್ಲ ಶೇಖರಿಸಿ ಒಂದನ್ನೂ ಬಿಡದಂತೆ ಅಚ್ಚುಹಾಕುವುದು. ಅಚ್ಚಾದ ಮೇಲೆ ಎಲ್ಲವನ್ನೂ ಕೊನೆಮುಟ್ಟಿ ಶೋಧಿಸಿ ಹೊಸದಾಗಿ ಲಕ್ಷಣ ಗ್ರಂಥಗಳನ್ನು ಕಾಲಕ್ಕೆ ತಕ್ಕಂತೆ ರಚಿಸುವುದು." ಇದು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು 1911ರಲ್ಲೇ ನುಡಿದ ವಾಣಿ. ಇದನ್ನೇ ಧ್ಯೇಯವಾಗಿಸಿಕೊಂಡು ಇದರ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲಿ ಅಳಿಸಿಹೋಗುತ್ತಿರುವ ಇತರ ಪೂರಕ ಸಂಶೋಧಕ ಪ್ರವೃತ್ತಿಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಆಚಾರ್ಯರ ಹೆಸರಿನಲ್ಲಿ, ಈ ಸಂಸ್ಥೆಯನ್ನು 1979 ರಲ್ಲಿ ಪ್ರೊ. ಎಂ.ವಿ. ಸೀತಾರಾಮಯ್ಯನವರು ಸ್ಥಾಪಿಸಿದ್ದು ರಾಷ್ಟ್ರಕವಿ ಕುವೆಂಪುರವರಿಂದ ಉದ್ಘಾಟನೆಯಾಗಿದೆ. ಯಶಸ್ವೀ 34 ವರ್ಷಗಳನ್ನು ಪೂರೈಸಿ 2004ರಲ್ಲಿ ರಜತೋತ್ಸವವನ್ನು ಆಚರಿಸಿದೆ.