ಕ್ರಮ ಸಂಖ್ಯೆ |
ಹೆಸರು |
ಸಂಪರ್ಕ |
ವಿವರಣೆ |
ಭಾವಚಿತ್ರ |
1 |
ಡಾ. ಲಕ್ಷ್ಮೀನಾರಾಯಣ ಆರ್ |
📞 9449028996 |
ಡಾ. ಆರ್. ಲಕ್ಷ್ಮೀನಾರಾಯಣ ಅವರು ೧೯೭೧ ರಿಂದ ೨೦೦೬ರವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ, ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ, ೨೦೦೬ ಮೇ ಯಿಂದ ೨೦೦೭ರ ಡಿಸೆಂಬರ್ ವರೆಗೆ ಧಾರವಾಡದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ.ಪಿ.ವಿ.ನಾರಾಯಣ ಅವರ ಮಾರ್ಗದರ್ಶನದಲ್ಲಿ ೨೦೦೪ರಲ್ಲಿ ‘ವಕ್ರೋಕ್ತಿ ಜೀವಿತ- ಒಂದು ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ ಪಡೆದಿರುತ್ತಾರೆ. ಇಂಗ್ಲಿಷ್ ಮತ್ತು ಹಿಂದಿಯಿಂದ ಅನುವಾದ ಮಾಡುವುದರಲ್ಲಿ ನಿರತರು. ಆರು ವಿಮರ್ಶಾ ಕೃತಿಗಳು, ಹನ್ನೊಂದು ಅನುವಾದಿತ ಕೃತಿಗಳು ಹಾಗೂ ಮೂರು ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ.
ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ೨೦೦೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೧೩ರ ಕರ್ನಾಟಕ ಸಾಹಿತ್ಯ ಅಕಡೆಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದಿಂದ ಉತ್ತಮ ಕಾಲೇಜು ಶಿಕ್ಷಕ ಪ್ರಶಸ್ತಿ.
|
 |
2 |
ಡಾ|| ಬೈರಮಂಗಲ ರಾಮೇಗೌಡ |
- |
ವಿಮರ್ಶಾ ಗ್ರಂಥಗಳು, ಕಥಾಸಂಕಲನ, ವ್ಯಕ್ತಿ ಚಿತ್ರ , ಜಾನಪದ ಕೃತಿಗಳು ವ್ಯಕ್ತಿಚಿತ್ರಗಳ ರಚನೆ
• ಹಲವಾರು ಸ್ಮರಣೆ ಸಂಚಿಕೆಗಳೂ ಪುಸ್ತಕಮಾಲೆಗಳು ಹಾಗೂ ಸಾಹಿತ್ಯ ಅಕಾಡೆಮಿಯ ವಾರ್ತಾಪತ್ರ ಮುಂತಾದವುಗಳ ಸಂಪಾದನೆ
• ಅಧ್ಯಕ್ಷ ಬಿಎಮ್ ಸಂಜೆ ಪದವಿ ಮಹಾವಿದ್ಯಾಲಯ ಬೆಂಗಳೂರು
• ಹಲವಾರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿ ಹಾಗೂ ಹಲವಾರು ಸಮಿತಿಗಳಲ್ಲಿ ಸದಸ್ಯತ್ವ.
• ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಸಾಹಿತ್ಯ ಕೌಸ್ತುಬ ಪ್ರಶಸ್ತಿ , ವಿಶ್ವಮಾನವ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಕರ್ನಾಟಕ ರತ್ನಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.
|
 |
3 |
ಶ್ರೀ ಡಿ.ನಂ. ವೆಂಕಟರಮಣಯ್ಯ |
- |
ನಿವೃತ್ತ ಬ್ಯಾಂಕ್ ಅಧಿಕಾರಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಈ ಹಿಂದೆ ಹಾಗೂ ಈಗ ಪದಾಧಿಕಾರಿಯಾಗಿ ಸೇವೆಸಲ್ಲಿಸಿರುತ್ತಾರೆ. ಇವರು ೨೦೧೦ರಿಂದ ೨೦೧೬ರ ವರೆಗೆ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಕೆಲ ಕಾಲ ಇವರು ಪ್ರತಿಷ್ಠಾನದ ಆಂತರಿಕ ಲೆಕ್ಕ ಪರಿಶೋಧಕರಾಗಿ ಲೆಕ್ಕಪತ್ರ ವ್ಯವಸ್ಥೆಯನ್ನು ಸದೃಢಗೊಳಿಸಿದ್ದಲ್ಲದೇ ಪ್ರತಿಷ್ಠಾನದ ಸರ್ವತೋಮುಖ ಬೆಳವಣಿಗೆ ಶ್ರಮಿಸಿರುತ್ತಾರೆ. |
 |
4 |
ಡಾ.ಆರ್.ವಾದಿರಾಜು |
- |
ವಿಸಹಾಯಕ ಪ್ರಾಧ್ಯಾಪಕರು, ವಿಜಯಕಾಲೇಜು
ಡಾ. ಆರ್. ವಾದಿರಾಜು ಅವರು ವಿಜಯಪದವಿ ಕಾಲೇಜು, ಆರ್.ವಿ.ರಸ್ತೆ, ಬಸವನಗುಡಿ, ಬೆಂಗಳೂರು ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲೇಖಕ, ಕವಿ, ವಿಮರ್ಶಕರಾಗಿ, ೪ ಸ್ವಂತ ಕೃತಿಗಳನ್ನು ರಚಿಸಿದ್ದು ಹಾಗೂ ೭ ಸಂಪಾದಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಸ್ನೇಹಕೂಟ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾÀಗಿ, ವೇದಿಕೆಯ ವತಿಯಿಂದ ೨೫ ಪುಸ್ತಕಗಳನ್ನು ಪ್ರಕಟಣೆ ಮಾಡಿದ್ದಾರೆ. ಹಾಗೂ ಇದರ ವತಿಯಿಂದ ೧೦೦ ಸದಾಭಿರುಚಿ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. |
 |
5 |
ಸಂಗಮೇಶ ಬಾಡವಾಡಗಿ |
- |
ಶ್ರೀ ಸಂಗಮೇಶ ಬಾದವಾಡಗಿಯವರು ಕರ್ನಾಟಕ ಸರ್ಕಾರದ ಶಿಕ್ಷಣ ಮತ್ತು ಆಹಾರ ನಾಗರೀಕ ಸರಬರಾಜು ಇಲಾಖೆ ಸೇವೆ ಸಲ್ಲಿಸಿದ್ದು ಕರ್ನಾಟಕ ರಾಜ್ಯಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷಾಧಿಕಾರಿಯಾಗಿ ನಿವೃತ್ತಿ ಹೊಂದಿದವರು. ಶ್ರೀಯುತರು ಎರಡು ಅವಧಿಗೆ ರಾಜ್ಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು ಹಲವಾರು ಅಖಿಲಭಾರತ ಸಾಹಿತ್ಯ ಸಮ್ಮೇಳನ, ಜಿಲ್ಲಾ, ತಾಲೂಕು ಸಾಹಿತ್ಯಸಮ್ಮೇಳನಗಳನ್ನು ಸಂಘಟಿಸಿರುತ್ತಾರೆ. ಕುಷ್ಟಗಿ, ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಶ್ರೀಯುತರು ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಒಟ್ಟು ಹದಿನೈದಕ್ಕು ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಹೊರದೇಶಗಳಿಗೂ ಅಲ್ಲಿನ ಕನ್ನಡ ಸಂಘಗಳ ಆಹ್ವಾನದ ಮೇರೆಗೆ ಭೇಟಿ ಕನ್ನಡ ಸಾಹಿತ್ಯ ಸಂಸ್ಕೃತಿ ಪರಿಚಯಿಸುವಲ್ಲಿ ಶ್ರಮಿಸಿದ್ದಾರೆ. ಅನೇಕ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಪ್ರಸ್ತುತ ಸಂಗಮೇಶ ಬಾದವಾಡಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುತ್ತಾರೆ.
|
 |
6 |
ಡಾ|| ವಿಜಯಾ ಸುಬ್ಬರಾಜ್ |
- |
ವಿದ್ಯಾರ್ಹತೆ:ಬಿಎಸ್ ಸಿ, ಎಂ ಎ,, ಪಿಹೆಚ್ ಡಿ ಎಂ ಎ(ಇಂಗ್ಲೀಷ್), ಎಲ್.ಎಲ್.ಬಿ, ಫ್ರೆಂಚ್ ಭಾಷೆಯಲ್ಲಿ ಡಿಪ್ಲೊಮಾ, ಸಾಹಿತ್ಯರತ್ನ(ಹಿಂದಿ) ವೃತ್ತಿ: ಪ್ರಾಧ್ಯಾಪಕರು(ನಿವೃತ್ತ), ಎಂ. ಇ. ಎಸ್, ಕಾಲೇಜು, ಭೆಂಗಳೂರು ಪ್ರಕಟಿತ ಕೃತಿಗಳು: ೧೨ ಕವನ ಸಂಕಲನಗಳು, ೯ ಕಾದಂಬರಿಗಳು, ೭ ಸಣ್ಣಕಥೆಗಳ ಸಂಕಲನಗಳು, ೮ ವಿಮರ್ಶಾ ಕೃತಿಗಳು, ೧೧ ಜೀವನ ಚರಿತ್ರೆಗಳು, ೧೪ ನಾಟಕಗಳು, ೨ ಮಕ್ಕಳ ಕಾದಂಬರಿಗಳು, ೧೪ ರೇಡಿಯೋ ಲೇಖನಗಳು, ನೂರಾರು ಬಿಡಿ ಲೇಖನಗಳು, ಪುರಸ್ಕಾರಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ೨೬ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು,
|
 |
7 |
ಪ್ರೊ|| ಶಾಂತರಾಜು |
- |
ಸಹಪ್ರಾಧ್ಯಾಪಕರರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು ವಿಜಯಾ ಕಾಲೇಜು ಬೆಂಗಳೂರು.
• ಹಲವಾರು ಲೇಖನಗಳು, ೧೫ ಕೃತಿಗಳ ಸಂಪಾದನೆ,
• ಟಿ.ವಿ ಮತ್ತು ರೇಡಿಯೋಗಳಲ್ಲಿ ಕಾರ್ಯಕ್ರಮ,
• ೨೦ಕ್ಕೂ ಮೀರಿ ನಾಟಕಗಳಲ್ಲಿ ಅಭಿನಯ
• ಕೆಂಪೇಗೌಡಪ್ರಶಸ್ತಿ, ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. |
 |
8 |
ಡಾ||ಕೋ.ವೆಂ. ರಾಮಕೃಷ್ಣೇಗೌಡ |
- |
ಡಾ||ಕೋ.ವೆಂ. ರಾಮಕೃಷ್ಣೇಗೌಡ
• ಪ್ರಗತಿಪರ ಚಿಂತಕ ಮೂರು ಕವನ ಸಂಕಲನ, ಮೂರು ವಿವರ್ಶಾ ಸಂಕಲನ, ಕನ್ನಡ ಚಿಂತನೆ ಕೇಂದ್ರಿತ ಐದು ಕೃತಿಗಳು, ಒಂದು ಸಂಶೋಧನಾ ಕೃತಿ, ನಾಲ್ಕು ವ್ಯಕ್ತಿಚಿತ್ರಗಳು ಹೀಗೆ ಒಟ್ಟು ೧೬ಕೃತಿಗಳ ರಚನೆ, ಎಂಭತ್ತಕ್ಕೂ ಅಧಿಕ ಕೃತಿಗಳನ್ನು ಸಂಪಾದನೆ
• ಕನ್ನಡ ಪರ ಚಳುವಳಿಗಳಲ್ಲಿ ಕಳೆದ ಮೂವತ್ತೆೈದು ವರ್ಷಗಳಿಂದ ಕ್ರಿಯಾತ್ಮಕವಾಗಿ ತೊಡಗಿಕೊಂಡು ಬರುತ್ತಿದ್ದಾರೆ. ಮೂವತ್ತೇಳು ವರ್ಷಗಳಿಂದ ನಾಡುನುಡಿಗೆ ಸೇವೆ ಸಲ್ಲಿಸುತ್ತಿರುವ ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷರು.
• ‘ಕನ್ನಡ ಭೂಷಣ’, ರಾಮ್ ಜಾದವ್ ರಾಜ್ಯಮಟ್ಟದ ಪುಸ್ತಕ, ಸರ್. ಎಂ. ವಿಶ್ವೇಶ್ವರಯ್ಯ, ಕರುನಾಡಸಿರಿ, ಗಡಿನಾಡಧ್ವನಿ ಶಿಕ್ಷಣರತ್ನ, ಕುವೆಂಪು, ಕನ್ನಡಸೇವಾರತ್ನ ಇನ್ನು ಹಲವಾರು ಪ್ರಶಸ್ತಿಗಳು
• ೧೧೦ ಅಧಿಕ ಸಂಘಸಂಸ್ಥೆಗಳಿಂದ ಸನ್ಮಾನ ಸ್ವೀಕಾರ.
|
 |
9 |
ಶ್ರೀ ಎಂ.ಎಸ್. ರಾಮಪ್ರಸಾದ್ |
- |
- |
 |
10 |
ಪ್ರೊ. ಹೆಚ್. ಶೇಷಗಿರಿರಾವ್ |
- |
- |
 |
11 |
ಶ್ರೀ ರಾ.ನಂ ಚಂದ್ರಶೇಖರ್ |
- |
- |
 |
12 |
ಶ್ರೀ ಬಿ.ಆರ್. ರವೀಂದ್ರನಾಥ್ |
- |
ವಿತ್ತೀಯ ಸಲಹೆಗಾರ, ಅನುವಾದಕ, ಲೇಖಕ ,
ನಿರ್ದೇಶಕ, ಇನ್ಸ್ಟಿ ಟ್ಯೂಟ್ ಆಫ್ ಟ್ರಾನ್ಸೆಲೆಷನ್ ಸ್ಟಡೀಸ್ ಬೆಂಗಳೂರು
ಹಲವಾರು ಸಮಿತಿಗಳು, ಸಂಘ ಸಂಸ್ಥೆಗಳಲ್ಲಿ ಈ ಹಿಂದೆ ಹಾಗೂ ಈಗ ಸದಸ್ಯ/ಪದಾಧಿಕಾರಿ |
 |
13 |
ಡಾ|| ಎಸ್. ಅನಿಲ್ ಕುಮಾರ್ |
- |
ಅವರು ವಾಣಿಜ್ಯ ಉಪನ್ಯಾಸಕರಾಗಿ ಕಳೆದ ೧೬ವರ್ಷಗಳಿಂದ ವಿಜಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಸಿಂದಿ ವಾಣಿಜ್ಯ ಕಾಲೇಜಿನಲ್ಲಿ ಉಪ-ಪ್ರಾಂಶುಪಾಲರು. ಉದಯಭಾನು ಕಲಾ ಸಂಘದ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಸ್ಥೆಯ ಉಚಿತ ಉಪನ್ಯಾಸ ತರಗತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದಲ್ಲಿ ಬೋಧಿಸುವದರೊಂದಿಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. |
 |
12 |
ಡಾ.ಜಯಮ್ಮ ಕರಿಯಣ್ಣ |
- |
ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ವ್ಯವಸ್ಥಾಪಕರಾಗಿ ನಿವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಹಾಗೂ ಮಾಜಿ ಸಂಶೋಧನೆ ನಿರ್ದೇಶಕರು ಹಲವಾರು ಸಂಸ್ಥೆಗಳಲ್ಲಿ ಸ್ವಯಂಪ್ರೇರಿತ ಸೇವೆ. ಹಲವಾರು ಪ್ರಶಸ್ತಿಗಳು ಬಂದಿವೆ. |
 |
13 |
ಪ್ರೊ. ಜಿ. ಅಶ್ವತ್ಥನಾರಾಯಣ |
- |
ಸರ್ಕಾರಿ ಡಿಗ್ರಿ ಕಾಲೇಜುಗಳಲ್ಲಿ ೩೦ ವರ್ಷ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತರು. ಹಂಪಿ ವಿಶ್ವವಿದ್ಯಾಲಯದ ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಕೆಎ.ಎಸ್, ಐಎಎಸ್ ವಿದ್ಯಾರ್ಥಿಗಳಿಗೆ ತರಬೇತಿ ಸರ್ಕಾರಿ ಅಧಿಕಾರಿಗಳಿಗೆ ಆಡಳಿತ ಕನ್ನಡ ಶಿಬಿರಗಳನ್ನು ನಡೆಸಿದ್ದಾರೆ. ಅಮೇರಿಕಾದಲ್ಲಿ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. |
 |
14 |
ಶ್ರೀ ಸಿ.ಕೆ ರಾಮೇಗೌಡ |
- |
ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಹಲವಾರು ಸಂಘ ಸಂಸ್ಥೆಗಳಲ್ಲಿ ಈ ಹಿಂದೆ ಹಾಗೂ ಈಗ ಪದಾಧಿಕಾರಿ |
 |
15 |
ಡಾ. ನಳಿನಿ ವೆಂಕಟೇಶ್ |
- |
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ‘ಸಮಗ್ರ ದಾಸ ಸಾಹಿತ್ಯ’ದ ೨೧ನೇ ಸಂಪುಟದ ವೇಳೆಯಲ್ಲಿ ಸಂಪಾದಕಿ ದೂರದರ್ಶನ ಮತ್ತು ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು |
 |
16 |
ಶ್ರೀಮತಿ ಲಕ್ಷ್ಮೀ ಎನ್. ಮೂರ್ತಿ |
- |
ಭರತನಾಟ್ಯ, ಶಾಸ್ತ್ರೀಯ ಸಂಗೀತ, ವಿದ್ವತ್ ಅಂತರಾಷ್ಟ್ರೀಯ ಸಾಂಸ್ಕೃತಿಕ ನಿರ್ದೇಶಕರು |
 |