ಬಿ.ಎಂ.ಶ್ರೀ.

"ಕನ್ನಡದ ಕಣ್ವ" ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಹೊಸಗನ್ನಡದ ಯುಗಪುರುಷರು; ಇಂದು ಹೊಸಗನ್ನಡದ ಸಾಹಿತ್ಯ ಎಂದು ಯಾವುದನ್ನು ಕರೆಯುತ್ತೇವೆಯೋ ಅದೆಲ್ಲಕ್ಕೂ ಪ್ರೇರಕ ಶಕ್ತಿ. ಇಂದಿನ ಎಲ್ಲ ಹೆಸರಾಂತ ಸಾಹಿತಿಗಳೂ ಇವರ ಶಿಷ್ಯ - ಪ್ರಶಿಷ್ಯರೇ. ಇಂತಹ ಆಚಾರ್ಯ ಪುರಷರ ಹೆಸರಿನ ಈ ಸಂಸ್ಥೆ ಸೃಜನ ಮತ್ತು ಸಂಶೋಧನ ಎರಡೂ ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದೆ. ಒಂದು ಪ್ರಾಚೀನ ಸಾಹಿತ್ಯ ಪರಿಷ್ಕರಣ. ಇನ್ನೊಂದು ಆಧುನಿಕ ಸಾಹಿತ್ಯದ ಪುರಸ್ಕರಣ.

ಸ್ಥಾಪನೆ : ಮೇ 6, 1979
ಸಂಸ್ಥಾಪಕರು : ಪ್ರೊ. ಎಂ.ವಿ. ಸೀತಾರಾಮಯ್ಯ
ಉದ್ಘಾಟಕರು : ರಾಷ್ಟ್ರಕವಿ ಕುವೆಂಪು, 10-3-1988
ಸಂಸ್ಥಾಪಕ ಕಾರ್ಯದರ್ಶಿ : ಪ್ರೊ. ಎಂ.ವಿ. ಸೀತಾರಾಮಯ್ಯ, 6-5-1979 ರಿಂದ 8-10-1989
ಪೋಷಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್
ಭವನದ ಶಂಕುಸ್ಥಾಪನೆ : 24-10-1997
ಬಿ.ಎಂ.ಶ್ರೀ. ಕಲಾಭವನದ ಲೋಕಾರ್ಪಣೆ ರಜತಮಹೋತ್ಸವ 11-9-2004

ಕನ್ನಡದಲ್ಲಿರುವ ಕೆಲವೇ ಸಂಶೋಧನಾತ್ಮಕ ನಿಯತಕಾಲಿಕೆಗಳಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವ "ಕರ್ನಾಟಕ ಲೋಚನ" ಪತ್ರಿಕೆಯನ್ನು ಪ್ರತಿಷ್ಠಾನ 1982ರಲ್ಲಿ ಆರಂಭಿಸಿತು. ಸಂಶೋಧನ ಕ್ಷೇತ್ರದ ವಿವಿಧ ಶಾಖೆಗಳಲ್ಲಿ ನುರಿತ ವಿದ್ವಾಂಸರು ಬರೆಯುವ ಸಂಶೋಧನ ಲೇಖನಗಳು, ಟಿಪ್ಪಣಿಗಳು, ಸಂಶೋಧನ ಗ್ರಂಥಗಳ ವಿಮರ್ಶೆ, ಟೀಕೆ-ಟಿಪ್ಪಣಿ ಇತ್ಯಾದಿ ಇದರಲ್ಲಿರುತ್ತವೆ. ನಿಯತವಾಗಿ ಪ್ರಕಟವಾಗುತ್ತಿರುವ ನಾಡಿನ ಏಕೈಕ ವಿದ್ವತ್ ಪತ್ರಿಕೆ ಎಂಬ ಹೆಗ್ಗಳಿಕೆ ಇದಕ್ಕಿದೆ. ವಾರ್ಷಿಕ ಚಂದಾ : ವ್ಯಕ್ತಿಗಳಿಗೆ ರೂ. 40/- ಅಜೀವ ರೂ. 400/-, ಸಂಸ್ಥೆ ಗ್ರಂಥಾಲಯಗಳಿಗೆ ವಾರ್ಷಿಕ 100-00. ಪ್ರತಿಷ್ಠಾನದ ಸದಸ್ಯರಿಗೆ ಉಚಿತ.

ಬಿ.ಎಂ.ಶ್ರೀ. ಪ್ರತಿಷ್ಠಾನಕ್ಕೆ ನೀವೂ ಈ ರೀತಿಯಾಗಿ ಸಹಾಯ ಮಾಡಬಹುದು?

  • ಅ. ಸದಸ್ಯರಾಗುವುದರ ಮೂಲಕ
  • ಆ. ದತ್ತಿನಿಧಿಗಳನ್ನು ಸ್ಥಾಪಿಸುವ ಮೂಲಕ
  • ಇ. ಪ್ರತಿಷ್ಠಾನದ ಚಟುವಟಿಕೆಗಳಿಗೆ ಧನಸಹಾಯದ ಮೂಲಕ. ದಾನಿಗಳಿಗೆ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಸೆಕ್ಷನ್ 80 ಜಿ ಸೌಲಭ್ಯ ಲಭ್ಯವಾಗುತ್ತದೆ.
  • ಈ. ಕಚೇರಿ-ಗ್ರಂಥಾಲಯಗಳಿಗೆ ಬೇಕಾಗುವ ಪೀಠೋಪಕರಣಗಳ ಹಾಗೂ ಉಪಕರಣಗಳನ್ನು ದಾನ ರೂಪದಲ್ಲಿ ನೀಡು ಮೂಲಕ.
  • ಉ. ಸ್ತಕ - ಹಸ್ತಪ್ರತಿ - ಪತ್ರಗಳ ದಾನದ ಮೂಲಕ : ಹಸ್ತಪ್ರತಿಗಳು ನಿಮ್ಮಲ್ಲಿದ್ದರೆ, ಹಾಳುಮಾಡದೆ, ನಿರ್ಲಕ್ಷಿಸದೆ ದಾನವಾಗಿ ನೀಡಬಹುದು. ಮೌಲಿಕ ಸ್ತಕಗಳನ್ನೂ ಸಾಹಿತಿ - ಗಣ್ಯರ ಪತ್ರ - ಹಸ್ತ ಪ್ರತಿಗಳನ್ನು ಪ್ರತಿಷ್ಠಾನಕ್ಕೆ ದಾನಮಾಡಬಹುದು.
  • ಊ. ಪುಸ್ತಕಗಳನ್ನು ಕೊಳ್ಳುವ ಮೂಲಕ : ಪ್ರತಿಷ್ಠಾನದ ಪ್ರಕಟನೆಗಳು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಮೌಲಿಕ ಗ್ರಂಥಗಳಾಗಿದ್ದು ಅವುಗಳನ್ನು ಸ್ವಂತಕ್ಕೆ, ಸ್ನೇಹಿತರಿಗೆ, ಸಂಘ - ಸಂಸ್ಥೆ, ಗ್ರಂಥಾಲಯಗಳಿಗೆ ಕೊಳ್ಳುವ ಮೂಲಕ ಸಹಕರಿಸಬಹುದು.

ಬಿ.ಎಂ.ಶ್ರೀ. ಕಲಾಭವನ

150 ರಿಂದ 200 ಜನರಿಗೆ ಸ್ಥಳಾವಕಾಶ, ಧ್ವನಿ - ಬೆಳಕಿನ ಸೌಲಭ್ಯ ಇರುವ ಈ ಸಭಾ ಭವನ ಸಾಹಿತ್ಯ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿದೆ. ಉಪನ್ಯಾಸ, ವಿಚಾರಗೋಷ್ಠಿ, ಸ್ತಕ ಬಿಡುಗಡೆ, ಕವಿಗೋಷ್ಠಿ, ಸಭೆ, ಸಂವಾದ, ಸಂಗೀತ, ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಂಕೇತಿಕ ಸೇವಾ ಶುಲ್ಕದ ಮೇರೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಗೆ ನೀಡಲಾಗುವುದು.