ಗ್ರಂಥಾಲಯ


ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಥಾನ ಬೆಂಗಳೂರು ಗ್ರಂಥಾಲಯದ ರೂಪ ರೇಷೆಗಳು

ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಥಾನ ,ಬೆಂಗಳೂರು, ಗ್ರಂಥಾಲಯ 1979 ರಲ್ಲಿ ಸ್ಥಾಪನೆಯಾಯಿತು.
ಸ್ಥಾಪನಾ ವರ್ಷದಿಂದಲೇ ಶ್ರೀಯುತ ಎಂ.ವಿ.ಸೀ. ಯವರು ತಮ್ಮದೇ ಪುಸ್ತಕ ಸಂಗ್ರಹವನ್ನು ಮೂಲ ದ್ರವ್ಯವಾಗಿ ಬಳಸಿ ಈ ಸಂಸ್ಥೆಯ ಗ್ರಂಥಾಲಯವನ್ನು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಶೇಖರಣೆಯಾದ ಒಟ್ಟು ಗ್ರಂಥಗಳ ಸಂಖ್ಯೆ 26000 ಹಾಗೂ ನಿಯತಕಾಲಿಕೆಗಳ ಸಂಖ್ಯೆ 7100.

ಈ ಅಮೂಲ್ಯವಾದ ಗ್ರಂಥಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ಜೋಡಿಸಲಾಗಿದೆ.ಹಾಗೂ ಎಲ್ಲ ಪುಸ್ತಕಗಳ ಮಾಹಿತಿಯನ್ನು ಗಣಕಯಂತ್ರದಲ್ಲಿ ದಾಖಲಿಸಲಾಗಿದೆ.ಹೀಗಾಗಿ ಲಭ್ಯವಿರುವ ಪುಸ್ತಕವನ್ನು ಸುಲಭವಾಗಿ ಹುಡುಕಬಹುದು. ಓದುಗರಿಗೆ ಸಹಾಯವಾಗುವದಕ್ಕಾಗಿ ಎಲ್ಲ ಕಪಾಟುಗಳ ಮೇಲೆ ವಿವರಣಾ ಪಟ್ಟಿಯನ್ನು ಲಗತ್ತಿಸಲಾಗಿದೆ.

ಈ ಅಮೂಲ್ಯ ಹಾಗೂ ಅಪರೂಪವಾದ ಪುಸ್ತಕ ಸಂಗ್ರಹದ ಪ್ರಯೋಜನವನ್ನು ಪ್ರತಿಷ್ಠಾನದ ಸದಸ್ಯರು ಪಡೆಯಬೇಕಾಗಿ ಕೋರಲಾಗಿದೆ.