ಧ್ಯೇಯೋದ್ದೇಶಗಳು


1. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಜ್ಞಾನದ ವಿವಿಧ ಶಾಖೆಗಳಲ್ಲಿ ಸಂಶೋಧನಾ ದೃಷ್ಠಿಯ ಪಾಂಡಿತ್ಯವನ್ನು ಪ್ರೋತ್ಸಾಹಿಸುವುದು ಪ್ರತಿಷ್ಠಾನದ ಪ್ರಮುಖ ಉದ್ದೇಶವಾಗಿದೆ ಮತ್ತು ವಿಶೇಷವಾಗಿ ಹಸ್ತಲೇಖನ ಶಾಸ್ತ್ರದ ಶಾಖೆಗಳಲ್ಲಿನ ಅಧ್ಯಯನ ಪ್ರಗತಿಯನ್ನು ವೃದ್ಧಿಸುವುದು, ಪುಸ್ತಕ ಬರಹಗಳ ವಿಮರ್ಶೆ, ವ್ಯಾಕರಣ ಅಧ್ಯಯನಗಳು, ಪದಗಳ ಉತ್ಪತ್ತಿ ಶಾಸ್ತ್ರ, ಶಿಲಾಶಾಸನ ಅಧ್ಯಯನಗಳು, ನಿಂಟು ರಚನೆ, ಶಬ್ದರಚನಾ ಶಾಸ್ತ್ರ, ಭಾಷಾ ಮತ್ತು ಧ್ವನಿ ಶಾಸ್ತ್ರ, ಸಾಹಿತ್ಯ ವಿಮರ್ಶೆ, ಗಾಯನ ಶಾಸ್ತ್ರ ಮತ್ತು ಕನ್ನಡದಲ್ಲಿ ಸಂಗೀತ ರಚನೆಗಳು ಮತ್ತು ಪತ್ರಾಗಾರಗಳ ಕೆಲಸ ಕೈಗೊಳ್ಳುವುದು ಅಂದರೆ ಕನ್ನಡ ಭಾಷೆಯಲ್ಲಿನ ಹಸ್ತಲೇಖನ ಮತ್ತು ಲೇಖಕರ ಪತ್ರಗಳ ಸಂಗ್ರಹಣೆ ಮತ್ತು ಸಂರಕ್ಷಣೆ.

2. ಸದಸ್ಯರಲ್ಲಿ "ಸಂಘ ವಿಧೇಯತೆ"ಯನ್ನು ಬಲಪಡಿಸುವುದು.

3. ಮೇಲೆ ಹೇಳಿದ ಅಧ್ಯಯನ ವಿಭಾಗಗಳಲ್ಲಿ ದತ್ತಿನಿಧಿ ಭಾಷಣ ಸರಣಿಗಳನ್ನು ಪ್ರಾರಂಭಿಸುವುದು.

4. ಎಲ್ಲಾ ಕಾಲಾವಧಿಗಳಿಗೆ ಅಂದರೆ ಪ್ರಾಚೀನ, ಮಧ್ಯಕಾಲೀನ ಮತ್ತು ನ್ಯ ಕಾಲಾವಧಿಗಳಿಗೆ ಸಂಬಂಧಿಸಿದ ಸಂಕೇತ ಬಿಡಿಸಿ ಓದುವ ಕಲೆಯಲ್ಲಿ ಮತ್ತು ಹಸ್ತಪ್ರತಿಗಳು, ದಸ್ತಾವೇಜುಗಳು ಮತ್ತು ಸಾಹಿತ್ಯ ಮೌಲದ್ಯ ಕೃತಿಗಳ ಪರಿಷ್ಕರಣೆಯಲ್ಲಿ ನವದೃಷ್ಠಿಕೋನ ತರಗತಿಗಳು ಮತ್ತು ತರಬೇತಿಯನ್ನು ನಡೆಸುವುದು ಮತ್ತು ಇಂತಹ ಕೃತಿಗಳ ಅಥವಾ ಪ್ರಸಿಷ್ಠಾನವು ಅಪೇಕ್ಷಿಸುವ ಇಂತಹ ಯಾವುದೇ ಕೃತಿಯ ಮುದರಣ ಮತ್ತು ಪ್ರಕಾಶನಕ್ಕೆ ವ್ಯವಸ್ಥೆ ಮಾಡುವುದು.

5. ಮೇಲ್ಕಾಣಿಸಿದ ಶಾಖೆಗಳಲ್ಲಿ ಶ್ರೇಷ್ಠತೆ ಸಾಧಿಸಿರುವ ಮತ್ತು ಮೇಲ್ಕಾಣಿಸಿದ ವ್ಯಾಸಂಗಗಳು ಮತ್ತು ಶಾಖೆಗಳ ಅಭಿವೃದ್ಧಿಗೆ ವಿಶೇಷವಾದ ಕೊಡುಗೆ ನೀಡಿರುವ ಉನ್ನತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದು ಮತ್ತು ಸಹಭಾಗಿತ್ವ ಪ್ರಾರಂಭಿಸುವುದು, ಗೌರವಗಳು, ಬಿರುದುಗಳು ಅಥವಾ ಇನ್ನಾವುದೇ ಸೂಕ್ತ ರೀತಿಯಲ್ಲಿ ಪ್ರದಾನ ಮಾಡಿ ಮನ್ನಣೆ ನೀಡುವುದು.

6. ಮೇಲೆ ಹೇಳಿದ ಅಧ್ಯಯನ ವಿಭಾಗಗಳಲ್ಲಿ ಅಧ್ಯಯನ ಮತ್ತು ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ಪ್ರತಿಭಾವಂತರ ಹಿತಾಸಕ್ತಿಗಳನ್ನು ಷಿಸುವುದು ಮತ್ತು ರಕ್ಷಣೆ ಮಾಡುವುದು.

7. ಹಳೆಯ ದಾಖಲೆಗಳು, ಹಸ್ತಪ್ರತಿಗಳು ಮತ್ತು ಕೃತಿಗಳ ರಕ್ಷಣೆಗಾಗಿ ತಿಳುವಳಿಕೆ ನೀಡುವುದು ಮತ್ತು ಜ್ಞಾನವನ್ನು ಹರಡುವುದು ಹಾಗೂ ಹಳೆಯ ದಾಖಲೆಗಳು, ಹಸ್ತಪ್ರತಿಗಳು ಮತ್ತು ಕೃತಿಗಳ ಪರಿಷ್ಕರಣೆಯನ್ನು ಸಹ ಮಾಡುವುದು.

8. ಇದೇ ರೀತಿಯ ಉದ್ದೇಶ ಮತ್ತು ಗುರಿಯಿರುವ ಇತರ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮುಚಿತ ರೀತಿಯಲ್ಲಿ ಸಹಭಾಗಿತ್ವದಲ್ಲಿ ಕೆಲಸ ಮಾಡುವುದು.

9. ಗಂಥಾಲಯ/ಗ್ರಂಥಾಲಯಗಳನ್ನು ನಡೆಸುವುದು ಮತ್ತು ಗ್ರಂಥಾಲಯದಲ್ಲಿ ಸ್ತಕಗಳು, ಮತ್ತು ದಾಖಲೆಗಳು ಮತ್ತು ಹಸ್ತಪ್ರತಿಗಳು ಮುಂತಾದವುಗಳಿಂದ ಉದ್ಧರಿಸಿದ ಭಾಗಗಳನ್ನು ಹಾಗೂ ಮೇಲ್ಕಾಣಿಸಿದ ಶಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಿಗದಿತ ಶುಲ್ಕದ ಪಾವತಿಯೊಂದಿಗೆ ಒದಗಿಸುವುದು.

10. ಮೇಲೆ ಹೇಳಿದ ಉದ್ದೇಶಗಳನ್ನು ಸಾಧಿಸಲು ಪ್ರಾಸಂಗಿಕ ಮತ್ತು ಅನುಕೂಲಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.