ಗ್ರಂಥಾಲಯದ ರೂಪ ರೇಷೆಗಳು

ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಥಾನ ,ಬೆಂಗಳೂರು, ಗ್ರಂಥಾಲಯ  1979 ರಲ್ಲಿ  ಸ್ಥಾಪನೆಯಾಯಿತು.

ಸ್ಥಾಪನಾ ವರ್ಷದಿಂದಲೇ ಶ್ರೀಯುತ ಎಂ.ವಿ.ಸೀ. ಯವರು ತಮ್ಮದೇ ಪುಸ್ತಕ ಸಂಗ್ರಹವನ್ನು ಮೂಲ ದ್ರವ್ಯವಾಗಿ ಬಳಸಿ ಈ ಸಂಸ್ಥೆಯ ಗ್ರಂಥಾಲಯವನ್ನು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ  ಶೇಖರಣೆಯಾದ ಒಟ್ಟು ಗ್ರಂಥಗಳ ಸಂಖ್ಯೆ 26000 ಹಾಗೂ ನಿಯತಕಾಲಿಕೆಗಳ ಸಂಖ್ಯೆ 7100
ಈ ಅಮೂಲ್ಯವಾದ ಗ್ರಂಥಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ಜೋಡಿಸಲಾಗಿದೆ. ಹಾಗೂ ಎಲ್ಲ ಪುಸ್ತಕಗಳ ಮಾಹಿತಿಯನ್ನು ಗಣಕಯಂತ್ರದಲ್ಲಿ ದಾಖಲಿಸಲಾಗಿದೆ.ಹೀಗಾಗಿ ಲಭ್ಯವಿರುವ ಪುಸ್ತಕವನ್ನು ಸುಲಭವಾಗಿ ಹುಡುಕಬಹುದು. ಓದುಗರಿಗೆ ಸಹಾಯವಾಗುವದಕ್ಕಾಗಿ ಎಲ್ಲ ಕಪಾಟುಗಳ  ಮೇಲೆ ವಿವರಣಾ ಪಟ್ಟಿಯನ್ನು ಲಗತ್ತಿಸಲಾಗಿದೆ.

ಗ್ರಂಥಾಲಯದ ವಿಶೇಷ ಸಂಗ್ರಹಗಳು:

ಅ. ಪುಸ್ತಕಗಳ ಸಂಗ್ರಹ
1.ಸಂಭಾವನ ಅಥವಾ ಅಭಿನಂದನ ಗ್ರಂಥಗಳು ಕನ್ನಡ ಸಾಹಿತ್ಯದ ಮೊದಲ ಸಂಭಾವನ ಗ್ರಂಥ “ಸಂಭಾವನೆ” ಬಿ.ಎಂ.ಶ್ರೀ.ಯವರಿಗೆ 1941 ರಲ್ಲಿ ಅರ್ಪಿತವಾಗಿದೆ.ಈ ಗ್ರಂಥ ನಮ್ಮ ಗ್ರಂಥಾಲಯದಲ್ಲಿ ಲಭ್ಯವಿದೆ
2.ಪುಸ್ತಕರೂಪದಲ್ಲಿ ಪ್ರಕಟವಾದ ಮಹಾಪ್ರಬಂಧಗಳು   
3.ಋಗ್ವೇದಸಂಹಿತಾ 36 ಸಂಪುಟಗಳು
4.ಜಾನಪದ ಸಾಹಿತ್ಯದ ವಿಷೇಶ ಸಂಗ್ರಹ
5.ಭಾಷಾ ಶಾಸ್ತ್ರ.     
6.ಎಪಿಗ್ರಾಫಿಯಾ ಕರ್ನಾಟಿಕಾ- ಲೂಯಿಸ್ ರೈಸ : ಮೂಲ ಹಾಗು ಪರಿಷ್ಕೃತ ಆವೃತ್ತಿಯ ಸಂಪುಟಗಳು
7.ಅಪರೂಪವಾದ ನಿಘಂಟುಗಳ ಸಂಗ್ರಹ    
8.ಅಲಂಕಾರ ಶಾಸ್ತ್ರ ಹಾಗೂ ಕಾವ್ಯಮೀಮಾಂಸೆಯ  ಕನ್ನಡ ಹಾಗೂ ಆಂಗ್ಲ ಬಾಷೆ ಪುಸ್ತಕಗಳು
9.ಕನ್ನಡ ಸಾಹಿತ್ಯ - ಸಾಹಿತ್ಯ ಚರಿತ್ರೆ,ಪ್ರಾಚೀನ ಕಾವ್ಯ, ಆಧುನಿಕ ಕಾವ್ಯ, ನಾಟಕ,ಕಾದಂಬರಿ,ಪ್ರಬಂಧ
10.ಜೈನ ಸಾಹಿತ್ಯ
11.ಹರಿದಾಸ ಸಾಹಿತ್ಯ
12.ವೀರಶೈವ ಹಾಗೂ ವಚನ ಸಾಹಿತ್ಯ
13.ಕನ್ನಡ ಸಾಹಿತಿಗಳ ವಿಶೇಶ ಸಂಗ್ರಹ :   

             ಬಿ.ಎಂ.ಶ್ರೀ.,ಸಿದ್ದವನಹಳ್ಳಿ ಕೃಷ್ಣಶರ್ಮ, ವಿ.ಸೀತಾರಾಮಯ್ಯ ,ಎಂ.ವಿ.ಸಿತಾರಾಮಯ್ಯ
             ಡಿ.ವಿ.ಜಿ.,ಮಾಸ್ತಿ , ಕೈಲಾಸಂ,ಬೇಂದ್ರೆ,ಗೋವಿಂದ ಪೈ.ಶಂಬಾ,ಪು.ತಿ.ನ , ಶಿವರಾಮ
             ಕಾರಂತ,ಕುವೆಂಪು, ರಾಜರತ್ನಂ ಹಾಗೂ ವಿ.ಕೃ.ಗೋಕಾಕ

14.ಬಂಗಾಳಿ, ಹಿಂದಿ,ತಮಿಳು,ತೆಲುಗು,ಮಲಯಾಳಿ ಸಾಹಿತ್ಯದ ಕನ್ನಡ ಅನುವಾದ ಕೃತಿಗಳು
15.ಹಯವದನರಾವ್ ರವರ ಮೈಸೂರು ಗ್ಯಾಸೆಟಿಯರ ;ಕರ್ನಾಟಕ ಜಿಲ್ಲಾ ಗ್ಯಾಸೆಟಿಯರ
16.ಬಾರತ ದೇಶ ಹಾಗು ಕರ್ನಾಟಕ ಇತಿಹಾಸ
17. ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನ 1980 ರಿಂದ 2014 ರವರೆಗೆ ಪ್ರಕಟಿಸಿದ 117 ಪುಸ್ತಕಗಳ ಸಂಗ್ರಹ

ಆ. ನಿಯತಕಾಲಿಕಗಳು.
ಕರ್ನಾಟಕ ಲೋಚನ, .ಕನ್ನಡ ನುಡಿ,ಕನ್ನಡ ಸಾಹಿತ್ಯ ಪರಿಷತ್ತ ಪತ್ರಿಕೆ,ಜೀವನ,
ಜಯಕರ್ನಾಟಕ, ಪ್ರಬುದ್ಧ ಕರ್ನಾಟಕ ಹಾಗೂ ಕೆಲವು ಆಂಗ್ಲ ಭಾಷೆಯ ನಿಯತಕಾಲಿಕೆಗಳ ಸಂಪುಟಗಳೂ ಲಭ್ಯವಿವೆ.  

ಈ ಅಮೂಲ್ಯ ಹಾಗೂ ಅಪರೂಪವಾದ ಪುಸ್ತಕ ಸಂಗ್ರಹದ ಪ್ರಯೋಜನವನ್ನು ಪ್ರತಿಷ್ಠಾನದ ಸದಸ್ಯರು ಪಡೆಯಬೇಕಾಗಿ ಕೋರಲಾಗಿದೆ.
ಲಭ್ಯವಿರುವ ಅಮೂಲ್ಯ ಕನ್ನಡ ಸಾಹಿತ್ಯ ನಿಯತಕಾಲಿಕೆಗಳ ವಿವರ:

1.ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆ  ಸಂಪುಟ.1 (1916)  - 22 (1937)
2.ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ  ಸಂಪುಟ 23 (1938)
3.ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ  ಸಂಪುಟ 24 (1939) - 92 (2014)
4.ಕನ್ನಡ ನುಡಿ   ಸಂಪುಟ 1 (1938) – 80 (2015)
5.ಪ್ರಬುದ್ಧ ಕರ್ನಾಟಕ  ಸಂಪುಟ 1 (1919) – 81 (2000)