ಗ್ರಂಥಾಲಯದ  ಪಕ್ಷಿನೋಟ

ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಥಾನ ,ಬೆಂಗಳೂರು,1979 ಮೇ 6 ರಂದು ಪ್ರೊ. ಎಂ.ವಿ. ಸೀತಾರಾಮಯ್ಯನವರಿಂದ ಸ್ಥಾಪನೆಯಾಗಿದೆ..ಈ ಸಂಸ್ಥೆ ಸೃಜನ ಮತ್ತು ಸಂಶೋಧನ ಎರಡೂ ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದೆ.2003-04ರಿಂದ ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನ ಸಂಶೋಧನಾ ವಿಶ್ವವಿದ್ಯಾಲಯವಾದ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಸ್ನಾತಕೋತ್ತರ ಸಂಶೋಧನಾ ಕೇಂದ್ರವಾಗಿದೆ.ಈ ಸಂಸ್ಥೆಯು ಕನ್ನಡ ಶಾಸ್ತ್ರೀಯ ಭಾಷಾ ಅಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.ಇದಕ್ಕೆ ಪೂರಕವಾಗಿ ಹಸ್ತಪ್ರತಿ ಶಾಸ್ತ್ರ ತರಗತಿ,ಹಸ್ತಪ್ರತಿ ಅಧ್ಯಯನ ಡಿಪ್ಲೊಮ ಹಾಗೂ ಹಳಗನ್ನಡ ಕಾವ್ಯಾಭ್ಯಾಸ ಡಿಪ್ಲೊಮ ತರಗತಿಗಳನ್ನು ನಡೆಸಲಾಗುತ್ತಿದೆ.ಕನ್ನಡ ಭಾಷೆ,ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಕಾರ್ಯ ಕರ್ನಾಟಕ ಲೋಚನ ಪ್ರಕಟಣೆ,ಸಹೃದಯ – ಸಂವಾದ ಗೋಷ್ಠಿ.,ರಾಜ್ಯ ಮಟ್ಟದ ಹಸ್ತಪ್ರತಿ ಸಮಾವೇಶ,”ಸಿರಿಕಂಟ”-ವಿದ್ಯಾರ್ಥಿಗೋಷ್ಠಿ,ದತ್ತಿ ಉಪನ್ಯಾಸಗಳು,ದತ್ತಿ ಸಾಹಿತ್ಯ ಪ್ರಶಸ್ತಿಗಳು,ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕನ್ನಡ ಸಾಹಿತ್ಯೋಪಾಸಕರು –ವಿಶೇಷ ಕಾರ್ಯಕ್ರಮ ಮಾಲೆ ಇವುಗಳ ಮುಖಾಂತರ  ಇಲ್ಲಿ ದಿನವೂ ನಡೆಯುತ್ತಿವೆ..

ಮೇಲೆ ವಿವರಿಸಿದ ಎಲ್ಲ ಚಟುವಟಿಕೆಗಳಿಗೆ  ಗ್ರಂಥಾಲಯದ ಅವಶ್ಯಕತೆಯನ್ನು ಮನಗಂಡ ಪ್ರೋ.ಎಂ.ವಿ.ಸೀತಾರಾಮಯ್ಯ ನವರು  1979 ರಲ್ಲಿ  ಗ್ರಂಥಾಲಯವನ್ನು ಹುಟ್ಟುಹಾಕಿದರು. ಸ್ಥಾಪನಾ ರ್ಷದಿಂದಲೇ ಶ್ರೀಯುತ ಎಂವಿಸೀಯವರು ತಮ್ಮದೇ ಪುಸ್ತಕ ಸಂಗ್ರಹವನ್ನು ಮೂಲ ದ್ರವ್ಯವಾಗಿ ಬಳಸಿ ಈ ಸಂಸ್ಥೆಯ ಗ್ರಂಥಾಲಯವನ್ನು ಪ್ರಾರಂಭಿಸಿದರು. 

ಗ್ರಂಥಾಲಯದಲ್ಲಿನ ಪುಸ್ತಕಗಳ ಹಾಗೂ ನಿಯತಕಾಲಿಕೆಗಳ ವೈಜ್ಞಾನಿಕ ವಿಂಗಡನೆ ಹಾಗೂ ಜೋಡಣೆ ದಿನಾಂಕ 07/11/2011 ರಿಂದ ಪ್ರಾರಂಭವಾಯಿತು. ಪುಸ್ತಕಗಳ ವೈಜ್ಞಾನಿಕ ವಿಂಗಡನೆ ಹಾಗೂ ಜೋಡಣೆಗಾಗಿ  Dewey Decimal  Classification and Relative Index. Edition 19 ಈ ಪದ್ಧತಿಯನ್ನು ಅನುಸರಿಸಲಾಗಿದೆ. ನಮ್ಮ ಗ್ರಂಥಾಲಯದ ಪರಿಸರಕ್ಕೆ ಹೊಂದಿಕೆ ಯಾಗುವ ಸಲುವಾಗಿ ಈ ಪದ್ಧತಿಯಲ್ಲಿ ಕೆಳಗಿನ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

            1.ಕನ್ನಡ ಭಾಷೆ :494.814 ಬದಲಾಗಿ 4K0 ಬಳಸಲಾಗಿದೆ

            2.ಕನ್ನಡ ಸಾಹಿತ್ಯ :894.814 ಬದಲಾಗಿ 8K0 ಬಳಸಲಾಗಿದೆ

            3.ಭಾರತ ದೇಶದ ಇತಿಹಾಸದ ಪುಸ್ತಕಗಳ ವರ್ಗೀಕರಣಕ್ಕಾಗಿ Modified Dewey Decimal   
                 Classification Schedule for Indology  ಬಳಸಲಾಗಿದೆ.ಇದರ ಪ್ರತಿ ಗ್ರಂಥಾಲಯದಲ್ಲಿ   
                  ಲಭ್ಯವಿದೆ.

ಗ್ರಂಥಾಲಯದಲ್ಲಿನ ಪುಸ್ತಕಗಳ ಹಾಗೂ ನಿಯತಕಾಲಿಕೆಗಳ ಗಣಕೀಕರಣಕ್ಕಾಗಿ   E GRANTHALAYA VERSION 3 ಅಳವಡಿಸಲಾಗಿದೆ.
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ ,ಬೆಂಗಳೂರು ಹಸ್ತಪ್ರತಿ ಅಧ್ಯಯನ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು E GRANTHALAYA VERSION 3 ಅಳವಡಿಸಲಾಗಿದೆ.
ದಿನಾಂಕ14/06/2014 ರ ದಾಖಲೆಗಳ ಪ್ರಕಾರ ಗ್ರಂಥಾಲಯದಲ್ಲಿ ಇದ್ದ ಒಟ್ಟು ಪುಸ್ತಕಗಳ ಸಂಖ್ಯೆ 25375 ಹಾಗೂ ನಿಯತಕಾಲಿಕೆಗಳ ಸಂಖ್ಯೆ 7036
ದಿನಾಂಕ 27/06/2014 ರವರೆಗೆ ಗಣಕೀಕೃತವಾದ ಪುಸ್ತಕಗಳ ಸಂಖ್ಯೆ 19276  ಗಣಕೀಕರಣವಾಗ ಬೇಕಾದ ಪುಸ್ತಕಗಳ ಸಂಖ್ಯೆ  3453
ಪ್ರತಿಯೊಂದು ಕಪಾಟಿನ ಬದಿಯಲ್ಲಿ ಆಯಾ ಕಪಾಟಿನಲ್ಲಿ ಇಡಲಾದ ಪುಸ್ತಕಗಳ ವಿಷಯಸೂಚಿಯನ್ನು ಅಂಟಿಸಲಾಗಿದೆ.ಕಪಾಟಿನ ಒಳಗಡೆ ಪ್ರತಿಯೊಂದು ಸಾಲಿಗೂ ವಿಷಯಸೂಚಿ ಪಟ್ಟಿ ಅಂಟಿಸಲಾಗಿದೆ.

ಕಪಾಟು ಸಂಖ್ಯೆ 24A
              ಬಿ.ಎಂ.ಶ್ರೀಕಂಠಯ್ಯ ಹಾಗೂ ಎಂ.ವಿ.ಸೀತಾರಾಮಯ್ಯನವರ ಕೃತಿಗಳು

ಕಪಾಟು ಸಂಖ್ಯೆ 30-34
             ಕನ್ನಡ ನಿಯತಕಾಲಿಕೆಗಳನ್ನು ಅಕಾರಾದಿಯಾಗಿ  ಜೋಡಿಸಲಾಗಿದೆ

 ಕಪಾಟು ಸಂಖ್ಯೆ 34-36
              ಆಂಗ್ಲ ನಿಯತಕಾಲಿಕೆಗಳನ್ನು ಅಕಾರಾದಿಯಾಗಿ  ಜೋಡಿಸಲಾಗಿದೆ

ಕಪಾಟು ಸಂಖ್ಯೆ 53
              EPIGRAPHIA CARNATICA ,ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಹಾಗು ANNUAL REPORT OF THE  ARCHAEOLOGICAL SURVEY OF MYSORE

ಕಪಾಟು ಸಂಖ್ಯೆ 54
              ಬೃಹತ್ತಗ್ರಂಥಗಳು

ಕಪಾಟು ಸಂಖ್ಯೆ 55-56
            ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನ,ಬೆಂಗಳೂರು ಪ್ರಕಟಿಸಿದ 115 ಪ್ರಕಟಣೆಗಳು,
           .ಈ ಕಪಾಟುಗಳ ಕೀಲಿಕೈ ಗ್ರಂಥಪಾಲರ ಮೇಜಿನ ಡ್ರಾವರ್ ನಲ್ಲಿ ಇದೆ

ಕಪಾಟು ಸಂಖ್ಯೆ 57
           
ಲೋಚನ, ಕರ್ನಾಟಕ ಲೋಚನ ,ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನದ ವಾರ್ತಾಪತ್ರಗಳು ಹಿಂದಿನ ಸಂಚಿಕೆಗಳು ಹಾಗೂ ಪ್ರತಿಷ್ಠಾನದ ವಾರ್ಷಿಕ ವರದಿಗಳನ್ನು ಜೋಡಿಸಲಾಗಿದ

ಕಪಾಟು ಸಂಖ್ಯೆ 58-60       
          ಸಂಭಾವನಾಗ್ರಂಥಗಳು

 ಕಪಾಟು ಸಂಖ್ಯೆ 61      
          ವಿಶ್ವಕೋಶಗಳು

 ಕಪಾಟು ಸಂಖ್ಯೆ 62-63        
          ನಿಘಂಟುಗಳು

ಕಪಾಟು ಸಂಖ್ಯೆ 64
          1    ಕನ್ನಡ ನುಡಿಯ ಕೆಲವು ಸಂಪುಟಗಳು  (ಜೀರ್ಣಾವಸ್ಥೆಯಲ್ಲಿ ಇರುವ)
          2   ಮೈಸೂರು,ಕರ್ನಾಟಕ,ಗುಲಬರ್ಗಾ,ಬೆಂಗಳೂರು ವಿಶ್ವ ವಿದ್ಯಾಲಯಗಳ ಪ್ರಚಾರೋಪನ್ಯಾಸಮಾಲೆಯ ಪುಸ್ತಕಗಳು      
          3   ವಯಸ್ಕರ ಶಿಕ್ಷಣದ ಪುಸ್ತಕಮಾಲೆಯ ಪುಸ್ತಕಗಳು
          4   ಕರ್ನಾಟಕ ಕಾವ್ಯ ಕಲಾನಿಧಿ ಮಾಲೆ (Karnataka Kavya Kalanidhi Series) ಪುಸ್ತಕಗಳು
          5  ಚಿಕ್ಕ ಗಾತ್ರದ ಪುಸ್ತಕಗಳು (Pamphlets)

 ಕಪಾಟು ಸಂಖ್ಯೆ 65
             1. ಪುಸ್ತಕ ದಾಖಲಾತಿ ನೋಂದಣಿ ಪುಸ್ತಕಗಳು(Accession Registers)2 ರಿಂದ 7 ಪುಸ್ತಕ ದಾಖಲಾತಿ ನೋಂದಣಿ ಪುಸ್ತಕ 1 (ಪುಸ್ತಕ ಸಂಖ್ಯೆ 1 ರಿಂದ 3065)ಲಭ್ಯವಿರುವದಿಲ್ಲ
                .(Missing )ಹಾಗೂ ಆರು ಖಾಲಿಇರುವ ಪುಸ್ತಕ ದಾಖಲಾತಿ ನೋಂದಣಿ ಪುಸ್ತಕಗಳು
             2.ನಿಯತಕಾಲಿಕೆ ದಾಖಲೆ ಪುಸ್ತಕ -2
             3.ಗ್ರಂಥವಿತರಣೆ ನೋಂದಣಿ ಪುಸ್ತಕ(ಸದಸ್ಯರಿಗೆ ಮಾತ್ರ) -1
             4.ವಿದ್ಯಾರ್ಥಿಗಳಿಗೆ ಗ್ರಂಥವಿತರಣೆ ನೋಂದಣಿ ಪುಸ್ತಕ. -1
             5 ಗ್ರಂಥಾಲಯ ಬಳಕೆದಾರರ ದಾಖಲೆ ಪುಸ್ತಕ.
             6..ಉಕ್ಕಿನ ಪುಸ್ತಕ ತಡೆಗಳು,ಅಂಟಿನ ಪಟ್ಟಿಗಳು ಹಾಗೂ ಇತರೆ ಸಾಮಗ್ರಿಗಳು.
 

ಕಪಾಟು ಸಂಖ್ಯೆ 66
              ತಮಿಳು ಭಾಷೆ.ತೆಲಗು ಭಾಷೆ,ಹಿಂದೀ ಭಾಷೆ ,ಹಾಗೂ ಇತರ ಭಾಷೆಯ ಪುಸ್ತಕಗಳು

 ಕಪಾಟು ಸಂಖ್ಯೆ 67
              ಸಂಸ್ಕೃತ ಭಾಷೆಯ ಪುಸ್ತಕಗಳು

 ಕಪಾಟು ಸಂಖ್ಯೆ 68
             ಮಹಾಪ್ರಬಂಧಗಳನ್ನು (Thesis)

ಕಪಾಟು ಸಂಖ್ಯೆ 69
             ಋಗ್ವೇದಸಂಹಿತಾ

 ಸ್ಮರಣ ಸಂಚಿಕೆಗಳನ್ನು ಕಪಾಟು ಸಂಖ್ಯೆ 68 ಹಾಗೂ 69 ರ ಮೇಲೆ ಜೋಡಿಸಲಾಗಿದೆ
          

ಗ್ರಂಥಾಲಯದಲ್ಲಿನ ಸುಮಾರು 2000 ದ್ವಿಪ್ರತಿ ಪುಸ್ತಕಗಳನ್ನು ಬೇರ್ಪಡಿಸಿ ಪಟ್ಟಿ ಮಾಡಿ  .ಕೆಳಗೆ ನಮೂದಿಸಿದ ಗ್ರಂಥಾಲಯಗಳಿಗೆ ವಿತರಿಸಲಾಗಿದೆ. ವಿತರಿಸಿ ಉಳಿದ ದ್ವಿಪ್ರತಿ ಪುಸ್ತಕಗಳನ್ನು ಕಪಾಟು ಸಂಖ್ಯೆ 37 ಹಾಗೂ 38 ರ ಮೇಲೆ ಇರಿಸಲಾಗಿದೆ.

  1. ಹಸ್ತಪ್ರತಿ ಕಾರ್ಯಾಗಾರದಲ್ಲಿ(10/02/2014) ಭಾಗವಹಿಸಿದ 28 ವಿದ್ಯಾರ್ಥಿಗಳಿಗೆ 343 ಪುಸ್ತಕಗಳನ್ನು ದೇಣಿಗೆಯಾಗಿ ಕೊಡಲಾಗಿದೆ.
  2. ಉದಯಭಾನು ಕಲಾಸಂಘ,ಬೆಂಗಳೂರು ಇವರಿಗೆ ದಿನಾಂಕ 14/09/2014 ರಂದು 1001 ದ್ವಿಪ್ರತಿ ಪುಸ್ತಕಗಳನ್ನು ದೇಣಿಗೆಯಾಗಿ ಕೊಡಲಾಗಿದೆ
  3. ಡಿ.ವಿ.ಜಿ.ಪ್ರತಿಷ್ಠಾನ ,ಕೋಲಾರ ಇವರಿಗೆ ದಿನಾಂಕ 28/03/2014 ರಂದು 89 ದ್ವಿಪ್ರತಿ ಪುಸ್ತಕಗಳನ್ನು ದೇಣಿಗೆಯಾಗಿ ಕೊಡಲಾಗಿದೆ
  4. ಸುಭಾಷ ಸಾರ್ವಜನಿಕ ವಾಚನಾಲಯ,ಸೊಲಾಪುರ  ಇವರಿಗೆ ದಿನಾಂಕ  30/08/2013  ರಂದು 95 ದ್ವಿಪ್ರತಿ ಪುಸ್ತಕಗಳನ್ನು ದೇಣಿಗೆಯಾಗಿ ಕೊಡಲಾಗಿದೆ
  5. ಶ್ರೀ ಸಂಜಯ ಧನಪಾಲ ಹಂಜೆ,ಅಳಗವಾಡಿ ಗ್ರಂಥಾಲಯಕ್ಕೆ ದೇಣಿಗೆಯಾಗಿ ಕೊಢಲು 95 ದ್ವಿಪ್ರತಿ ಪುಸ್ತಕಗಳು ಹಾಗೂ 76 ಪ್ರತಿಷ್ಠಾನದ ಪ್ರಕಡಣೆಗಳನ್ನು ಪೆಟ್ಟಿಗೆಯಲ್ಲಿ ಇರಿಸಲಾಗಿದೆ.ಅಳಗವಾಡಿ ಗ್ರಂಥಾಲಯದವರು ಈ ವರೆಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿರುವದಿಲ್ಲ.

ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಕನ್ನಡ ನುಡಿ,ಪ್ರಬುದ್ಧ ಕರ್ನಾಟಕ,ಸಾಧನೆ,ಜೀವನ,        ಮಾನವಿಕ ಕರ್ನಾಟಕ,ಇತಿಹಾಸ ದರ್ಶನ.ಈ ನಿಯತಕಾಲಿಕೆಗಳ ದ್ವಿಪ್ರತಿಗಳನ್ನು ಬೇರ್ಪಡಿಸಿ ಗ್ರಂಥಾಲಯದ ಕಪಾಟುಗಳ ಮೇಲೆ ಇರಿಸಲಾಗಿದೆ.ಇವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಹಾಗೂ ಕನ್ನಡ ನುಡಿಗಳ  ದ್ವಿಪ್ರತಿ ಸಂಚಿಕೆಗಳ ಪಟ್ಟಿಯನ್ನು ತಯಾರಿಸಲಾಗಿದೆ. . ಉಳಿದ ನಿಯತಕಾಲಿಕೆಗಳ ದ್ವಿಪ್ರತಿ ಸಂಚಿಕೆಗಳ ಪಟ್ಟಿಯನ್ನು ತಯಾರಿಸ ಬೇಕು.

ಲೋಚನ ಹಾಗೂ ಕರ್ನಾಟಕ ಲೋಚನಗಳ  ಹಿಂದಿನ ಸಂಚಿಕೆಗಳನ್ನು ಸಂಪುಟಗಳ ಸಂಖ್ಯೆಗಳ ಪ್ರಕಾರ  ಜೋಡಿಸಿ  ಗ್ರಂಥಾಲಯದ ಕಪಾಟುಗಳ  ಮೇಲೆ ಜೋಡಿಸಲಾಗಿದೆ.

ಈ ಕೆಳಗೆ ಪಟ್ಟಮಾಡಿದ ಕಡತಗಳನ್ನು ಗ್ರಂಥಾಲಯದ ನಿರ್ವಹಣೆಗಾಗಿ ಬಳಸಲಾಗಿದೆ.
        1.ಸಂಕೀರ್ಣ ಕಡತ (Miscellaneous File)
        2.ಗ್ರಂಥದಾನ ಕಡತ(Donated Bokks File)
        3 ಗ್ರಂಥಾಲಯ ದ್ವಿ-ಪ್ರತಿ ಪುಸ್ತಕಗಳ ಕಡತ(Duplicate Books in the Library File)
        4.ಕನ್ನಡ ಭಾಷೆಯ ನಿಯತಕಾಲಿಕೆಗಳ ಪಟ್ಟಿಯ ಕಡತ(List of Kannada Periodicals File)
        5. ಆಂಗ್ಲ ಭಾಷೆಯ ನಿಯತಕಾಲಿಕೆಗಳ ಪಟ್ಟಿಯ ಕಡತ (List of English Periodicals File)
        6.ಪುಸ್ತಕಗಳ ವಿಷಯಸೂಚಿ,ವರ್ಗಸಂಖ್ಯೆ ಹಾಗೂ ಕಪಾಟು ಸಂಖ್ಯೆ ವಿವರಗಳ ಕಡತ
          (Subject Headings,Classification Number and Almirah Number details File)
        7.ಅಕಾರಾದಿ ವಿಷಯಸೂಚಿ ಕಡತ(Alphabetical Subject Index in Kannada File)

ಗ್ರಂಥಾಲಯ ದ್ವಿ-ಪ್ರತಿ ಪುಸ್ತಕಗಳ, ಕನ್ನಡ ಭಾಷೆಯ ನಿಯತಕಾಲಿಕೆಗಳ ಪಟ್ಟಿ,  ಆಂಗ್ಲ ಭಾಷೆಯ ನಿಯತಕಾಲಿಕೆಗಳ ಪಟ್ಟಿ ಹಾಗೂ ಪುಸ್ತಕಗಳ ವಿಷಯಸೂಚಿ,ವರ್ಗಸಂಖ್ಯೆ ಹಾಗೂ ಕಪಾಟು ಸಂಖ್ಯೆ ವಿವರಗಳು ಗಣಕಯಂತ್ರದಲ್ಲಿ ಲಭ್ಯವಿವೆ.