ಪ್ರೋ. || ಎಂ.ವಿ. ಸೀತಾರಾಮಯ್ಯ

"ದೇಶದಲ್ಲಿ ಹುಳು ತಿಂದುಹೋಗದೆ ಇರುವ ಗ್ರಂಥಗಳನ್ನೆಲ್ಲ ಶೇಖರಿಸಿ ಒಂದನ್ನೂ ಬಿಡದಂತೆ ಅಚ್ಚುಹಾಕುವುದು. ಅಚ್ಚಾದ ಮೇಲೆ ಎಲ್ಲವನ್ನೂ ಕೊನೆಮುಟ್ಟಿ ಶೋಧಿಸಿ ಹೊಸದಾಗಿ ಲಕ್ಷಣ ಗ್ರಂಥಗಳನ್ನು ಕಾಲಕ್ಕೆ ತಕ್ಕಂತೆ ರಚಿಸುವುದು." ಇದು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು 1911ರಲ್ಲೇ ನುಡಿದ ವಾಣಿ. ಇದನ್ನೇ ಧ್ಯೇಯವಾಗಿಸಿಕೊಂಡು ಇದರ ಜೊತೆಗೆ ಸಂಶೋಧನಾ ಕ್ಷೇತ್ರಗಳಲ್ಲಿ ಅಳಿಸಿಹೋಗುತ್ತಿರುವ ಇತರ ರಕ ಸಂಶೋಧಕ ಪ್ರವೃತ್ತಿಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಆಚಾರ್ಯರ ಹೆಸರಿನಲ್ಲಿ, ಈ ಸಂಸ್ಥೆಯನ್ನು 1979 ರಲ್ಲಿ ಪ್ರೋ|| ಎಂ.ವಿ. ಸೀತಾರಾಮಯ್ಯನವರು ಸ್ಥಾಪಿಸಿದ್ದು ರಾಷ್ಟ್ರಕವಿ ಕುವೆಂರವರಿಂದ ಉದ್ಘಾಟನೆಯಾಗಿದೆ. ಯಶಸ್ವೀ 34 ವರ್ಷಗಳನ್ನು ರೈಸಿ 2004ರಲ್ಲಿ ರಜತೋತ್ಸವವನ್ನು ಆಚರಿಸಿದೆ.

ಸಂಸ್ಥಾಪಕರಾದ ದಿವಂಗತ ಪ್ರೋ|| ಎಂ.ವಿ. ಸೀತಾರಾಮಯ್ಯನವರು ತಮ್ಮ ತನು ಮನ ಧನವನ್ನು ಸಮರ್ಪಿಸಿ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿ ನಾಡಿನಲ್ಲೆ ಒಂದು ಪ್ರತಿಷ್ಠಿತ ಸಂಸ್ಥೆಯನ್ನಾಗಿ ಮಾಡಿದ್ದಾರೆ. ಅವರ ಸಾಧನೆಯ ಫಲವಾಗಿ ಬೆಂಗಳೂರಿನಲ್ಲಿ "ಬಿ.ಎಂ.ಶ್ರೀ. ಕಲಾಭವನ", ತುಮಕೂರು ಜಿಲ್ಲೆಯ ಸಂಪಿಗೆ'ಯಲ್ಲಿ "ಬಿ.ಎಂ.ಶ್ರೀ. ಭವನ" ನಿರ್ಮಾಣಗೊಂಡು ಕಾರ್ಯನಿರತವಾಗಿವೆ. ಈ ಸಂಸ್ಥೆಯ ಬೆಳವಣಿಗೆಗೆ ಅನೇಕ ಹಿರಿಯರು ಕಾರಣರಾಗಿದ್ದಾರೆ.

ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರ

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಸ್ನಾತಕೋತ್ತರ ಸಂಶೋಧನ ಕೇಂದ್ರವಾಗಿರುವ ಪ್ರತಿಷ್ಠಾನದಲ್ಲಿ ಗಣ್ಯ ವಿದ್ವಾಂಸರ ಮಾರ್ಗದರ್ಶನದಲ್ಲಿ 10 ಜನ ಪಿ.ಎಚ್ಡಿ. ಪವಿ ಮತ್ತು 22 ವಿದ್ಯಾಗಳು ಎಂ.ಫಿಲ್. ಪದವಿ ಪಡೆದಿರುತ್ತಾರೆ. ನುರಿತ ಮಾರ್ಗದರ್ಶಕರ ಸಹಕಾರದಿಂದ ಈ ಅಧ್ಯಯನ ಕೇಂದ್ರವನ್ನು ನಡೆಸಲಾಗುತ್ತಿದೆ.